ಅಲ್ಲಿಹುದು ನನ್ನ ಮನೆ
ಇಲ್ಲಿಗೆ ಬಂದಿಹೆ ಸುಮ್ಮನೆ llಪll
ಕೈ ಬೀಸಿ ಕರೆಯುತ್ತಿದೆ ಕರುಳ ಸೆಲೆ
ಬರಲಾರೆ ಬಿಟ್ಟು ಈ ಜೀವ ನೆಲೆll೧ll
ಬದುಕೊಂದು ನಲ್ಮೆಯ ಪಯಣ
ಭಾವನೆಗಳು ಅದಕ್ಕಿಹ ತೋರಣ ll೨ll
ಹುಟ್ಟು ಸಾವುಗಳೇ ಬದುಕಿನ ಆದಿ ಅಂತ್ಯ
ಆಗುತಿಹುದು ನವ ಅನುಭವಗಳು ನಿತ್ಯ ll೩ll
ಏಳು ಬೀಳುಗಳಿಲ್ಲದ ಬದುಕು ನೀರಸ
ಅನುಭವಗಳು ತುಂಬುತಿಹುದು ನವರಸ ll೪ll
ಹಾದಿ ತಪ್ಪಸುತಿಹುದು ಕುರುಡು ಕಾಂಚಾಣ
ದಾರಿ ತೋರಿಸೊ ನಮಗೆ ಓ ಮುಖ್ಯಪ್ರಾಣ ll೫ll
ಜ್ಯೋಮೂಕೀ