Monday, December 31, 2012

ಭಟ್ರ ಇಲ್ಲಳ್ ಶಾರ್ದ

ಭಟ್ರ ಇಲ್ಲಳ್  ಶಾರ್ದ


ಚಿತ್ರ ಕೃಪೆ : ಇಂಟರ್ನೆಟ್ 

ಭಟ್ರ ಇಲ್ಲಳ್ ಶಾರ್ದ
ಜೋಕುಳು ಪೂರ ಪಾರ್ದ

ಭಟ್ರೆ ಅಮ್ಮೆರ್ನ ತಿಥಿ ಇನಿಗೆ
ಜೋಕ್ಲೆಗ್ ಪಾಯಸದ ವಣಸ್ ಗೆ

ಪಶಿನ್ಕಿರಿ ತೊವ್ವೆ ಚಿತ್ರಾನ್ನ
ಅಜಾಯಿನ ಕಜಿಪು ಪರಮಾನ್ನ

ಅಪ್ಪ ವಡೆ ಸುಕುನುಂಡೆ
ಬಾಳೆಪರ್ನದ್ ದ ರಸಾಯನ ಉಂಡೆ

ಬಾಳೆತೋ  ಇರೆಟ್  ಬಳಸುತೆರ್ಗೆ
ಪಂತ್ಯೆಡ್ ಉಣ್ ಯೆರೆ ಸುರು ಮಲ್ಪುಲೆ

ಜೋಕ್ಲೆಗ್ ಗಮ್ಮತ್ ದ ಭೋಜನ
ಭಟ್ರೆಗ್ ಅಮ್ಮೆರ್ನ ನೆನಪುತ ದಿನ

ಬದುಕು ಸಾವುದ ಈ ಪ್ರಯಾಣ
ಭಾವನಾತೀತ ಓ ಮುಖ್ಯಪ್ರಾಣ

ಇಂತೀ:  ಜ್ಯೋಮೂಕೀ

Thursday, December 27, 2012

ನೆರಳು - ಮಿನಿಗವನ

ನೆರಳು

ಬೆಳಕಿದ್ದೆಡೆ 
ಇಹುದು ನೆರಳು 
ತ್ರಿವಿಕ್ರಮನ 
ಬೆಂಬಿಡದ
ಬೇತಾಳನ ತರಹದಿ 
ಹಿಂಬಾಲಿಸುತಿಹುದು  
ಛಲ ಬಿಡದೇ
ದಿನವಿಡೀ.

ಜೊತೆಗಾರ 

ನೀ 
ಚಲಿಸಿದಂತೆಲ್ಲಾ 
ನಿನ್ನ 
ಹಿಂಬಾಲಿಸುತಿಹುದು 
ನೆರಳು 
ತಪ್ಪು 
ತಿಳಿಯಬೇಡ 
ಜೊತೆಗಾರನೆಂದು 
ಆದರೆ 
ಕಾರ್ಗತ್ತಲು 
ಬಂದರೆ 
ಕಾಣಸಿಗದು 
ನಿನ್ನ ನೆರಳು 
ತಿಳಿದುಕೋ ಗೆಳೆಯ 
ಬೆಳಕೇ  ನೆರಳಿನ 
ಜೊತೆಗಾರ

ಇರುಳು 

ಇರುಳು ನೆರಳಿನ ವೈರಿ 
ಬೆಳಕು, ನೆರಳನು ನುಂಗಿ 
ಮಾಡಿಹುದು ಗೆಳೆಯಾ 
ನಿನ್ನನ್ನು ಏಕಾಂಗಿ 

Tuesday, December 4, 2012

ಮಿಲ್ವಾಕೀ ಕಲಾಮಂದಿರ


ಮಿಲ್ವಾಕೀ  ಕಲಾಮಂದಿರ 



 ಚಿತ್ರ ಕೃಪೆ : ನಾಗರಾಜ ವಿಟ್ಟಲ್ 

ಮಾನವ  ನಿರ್ಮಿತ ಉಕ್ಕಿನ  ಹಕ್ಕಿ
ನಿಂತಿಹುದು ಇಲ್ಲಿ  ರೆಕ್ಕೆ ಬಿಚ್ಚಿ

ನಿವೃತ್ತ ಸೈನಿಕ ಸ್ಮಾರಕ ಉದ್ಯಾನವನದ ನಡುವೆ
ಮುಖಮಾಡಿ ನಿಂತಿಹುದು ಮಿಶಿಗನ್  ಸರೋವರದ ಕಡೆಗೆ

ಮಿಲ್ವಾಕೀ  ಕಲಾಮಂದಿರದ ಭವ್ಯ ಸಭಾಂಗಣ
ಕಣ್ಮನ ಸೆಳೆಯುವ ಸುಂದರ ಪ್ರವಾಸೀ ತಾಣ

ರೆಕ್ಕೆ ಬಿಚ್ಚಿ ನಿಂತಿರೋ ಗರುಡನ ತರಹ
ವಾಸ್ತುವಿಜ್ಞಾನದ  ಉನ್ನತಿಯ ಶ್ರೇಷ್ಠ  ಬರಹ

ಯಂತ್ರ ಸಂಯೋಜಿತ ತೊಲೆಯ ರಚನೆ
ಹಕ್ಕಿಯ ರೆಕ್ಕಯಾಡಿಸೋ ತರಹದ ಚಲನೆ

ಮನುಜ ಕುಲದ ಕಲಾಧೀಮಂತಿಕೆಯ ಭವ್ಯ ಚರಣ
ವಾಸ್ತು ಶಾಸ್ತ್ರವ ಶ್ರೀಮಂತಗೊಳಿಸೋ ಮುಖ್ಯಪ್ರಾಣ 

ಇಂತೀ:  ಜ್ಯೋಮೂಕೀ

Saturday, December 1, 2012

ಕಲ್ಲುಬಂಡೆ

ಕಲ್ಲುಬಂಡೆ 


ಚಿತ್ರ ಕೃಪೆ : ಅಂತರ್ಜಾಲ

ಅದು ಸಮುದ್ರ ದಂಡೆ
ಅಲ್ಲಿಹುದೊಂದು ಕಲ್ಲುಬಂಡೆ

ಬೀಸುತಿಹುದು ಬಿರುಗಾಳಿ
ಸುರಿಯುತಿಹುದು ಸಿಡಿಲು ಮಳೆ
ಕೊರೆಯುತಿಹುದು ಕಡು ಬಿಸಿಲು
ಅಬ್ಬರಿಸುತಿಹುದು ಬೃಹತ್ ತೆರೆ

ನಿನ್ನೆ ನಿನ್ನೆಗೆ, ಇಂದು ಇಂದಿಗೆ;
ಬರಲಿಹುದು ನಾಳೆ ನಾಳೆಗೆ
ಕಾಲಚಕ್ರವದು ಉರುಳುತಿಹುದು
ಶಿಲಾಪದರವು ಎದೆಗುಂದದೆ ನಿಂತಿಹುದು

ಕಷ್ಟವೇ ಬರಲಿ ಸುಖವೇ ಸಿಗಲಿ
ಹಗಲೇ ಕಾಣಲಿ ಇರುಳೆ ಇರಲಿ
ದೃಡವಾಗಿ ನಿಂತಿಹುದು ಶಿಲಾಹೂರಣ
ಪ್ರಕೃತಿ ರಹಸ್ಯವ ಬಿಡಿಸೋ ಮುಖ್ಯಪ್ರಾಣ


ಇಂತೀ:  ಜ್ಯೋಮೂಕೀ 

ಸೂರ್ಯಾಸ್ತ

ಸೂರ್ಯಾಸ್ತ 


ಚಿತ್ರ ಕೃಪೆ : ರಾಘವೇಂದ್ರ ಹೆಗಡೆ  
ದೂರದಾ ಬಾನಲ್ಲಿ ರವಿ ತಾ ಮುಳುಗಲು
ಭಾನು ಭುವಿಯೇಲ್ಲವೂ ಸುತ್ತಲೂ ಕತ್ತಲು

ರವಿ ನೀ ಬೆಳಗಲು ಸಪ್ತವರ್ಣಗಳು ಹಬ್ಬಿಹುದು
ನಿನ್ನ ಅಸ್ತಂಗತವು ಜಗವೆಲ್ಲ ಹರಡಿಹುದು  ಕಾರ್ಗತ್ತಲು


ಸೂರ್ಯಾಸ್ತ ಸಮಯ ರುದ್ರ ರಮಣೀಯ ದೃಶ್ಯ
ರಣ ರಂಗದಂತ್ಯದಂಚಿನ ಕೆಂಪು ರಕ್ತದೊಕುಳಿಯು

ದಿನವಿಡೀ ದುಡಿದು ದಣಿದ  ಜೀವಸಂಕುಲಕೆ
ಮೈಮನ ವಿಶ್ರಾಂತಿ, ಸುಖ ನಿದ್ರೆಯ ರಸಘಳಿಗೆ

ಸೃಷ್ಟಿ ಸಾವುಗಳ ಸಂಗಮ ಜೀವ ಜಂಗಮದ ಉಗಮ
ಬದುಕು ಭಾವಗಳ ಕಾರಣ ತಿಳಿಸೋ ಓ ಮುಖ್ಯಪ್ರಾಣ


ಇಂತೀ:  ಜ್ಯೋಮೂಕೀ