Saturday, December 1, 2012

ಕಲ್ಲುಬಂಡೆ

ಕಲ್ಲುಬಂಡೆ 


ಚಿತ್ರ ಕೃಪೆ : ಅಂತರ್ಜಾಲ

ಅದು ಸಮುದ್ರ ದಂಡೆ
ಅಲ್ಲಿಹುದೊಂದು ಕಲ್ಲುಬಂಡೆ

ಬೀಸುತಿಹುದು ಬಿರುಗಾಳಿ
ಸುರಿಯುತಿಹುದು ಸಿಡಿಲು ಮಳೆ
ಕೊರೆಯುತಿಹುದು ಕಡು ಬಿಸಿಲು
ಅಬ್ಬರಿಸುತಿಹುದು ಬೃಹತ್ ತೆರೆ

ನಿನ್ನೆ ನಿನ್ನೆಗೆ, ಇಂದು ಇಂದಿಗೆ;
ಬರಲಿಹುದು ನಾಳೆ ನಾಳೆಗೆ
ಕಾಲಚಕ್ರವದು ಉರುಳುತಿಹುದು
ಶಿಲಾಪದರವು ಎದೆಗುಂದದೆ ನಿಂತಿಹುದು

ಕಷ್ಟವೇ ಬರಲಿ ಸುಖವೇ ಸಿಗಲಿ
ಹಗಲೇ ಕಾಣಲಿ ಇರುಳೆ ಇರಲಿ
ದೃಡವಾಗಿ ನಿಂತಿಹುದು ಶಿಲಾಹೂರಣ
ಪ್ರಕೃತಿ ರಹಸ್ಯವ ಬಿಡಿಸೋ ಮುಖ್ಯಪ್ರಾಣ


ಇಂತೀ:  ಜ್ಯೋಮೂಕೀ 

2 comments:

  1. Good one.. then i can say live like a Kallu Bande.. (Sandhya will kill me .. :) :) )

    What is ಜ್ಯೋಮೂಕೀ?

    ReplyDelete
    Replies
    1. ಕಾವ್ಯ ನಾಮ....ಜ್ಯೋತಿ ಮೂರ್ತಿ ಕೀರ್ತಿ first three letters...I used to have same as my kavya naama in my child hood...in english...JMK....

      Delete