ಮಿಲ್ವಾಕೀ ಕಲಾಮಂದಿರ
ಚಿತ್ರ ಕೃಪೆ : ನಾಗರಾಜ ವಿಟ್ಟಲ್
ಮಾನವ ನಿರ್ಮಿತ ಉಕ್ಕಿನ ಹಕ್ಕಿ
ನಿಂತಿಹುದು ಇಲ್ಲಿ ರೆಕ್ಕೆ ಬಿಚ್ಚಿ
ನಿವೃತ್ತ ಸೈನಿಕ ಸ್ಮಾರಕ ಉದ್ಯಾನವನದ ನಡುವೆ
ಮುಖಮಾಡಿ ನಿಂತಿಹುದು ಮಿಶಿಗನ್ ಸರೋವರದ ಕಡೆಗೆ
ಮಿಲ್ವಾಕೀ ಕಲಾಮಂದಿರದ ಭವ್ಯ ಸಭಾಂಗಣ
ಕಣ್ಮನ ಸೆಳೆಯುವ ಸುಂದರ ಪ್ರವಾಸೀ ತಾಣ
ರೆಕ್ಕೆ ಬಿಚ್ಚಿ ನಿಂತಿರೋ ಗರುಡನ ತರಹ
ವಾಸ್ತುವಿಜ್ಞಾನದ ಉನ್ನತಿಯ ಶ್ರೇಷ್ಠ ಬರಹ
ಯಂತ್ರ ಸಂಯೋಜಿತ ತೊಲೆಯ ರಚನೆ
ಹಕ್ಕಿಯ ರೆಕ್ಕಯಾಡಿಸೋ ತರಹದ ಚಲನೆ
ಮನುಜ ಕುಲದ ಕಲಾಧೀಮಂತಿಕೆಯ ಭವ್ಯ ಚರಣ
ವಾಸ್ತು ಶಾಸ್ತ್ರವ ಶ್ರೀಮಂತಗೊಳಿಸೋ ಮುಖ್ಯಪ್ರಾಣ
ಇಂತೀ: ಜ್ಯೋಮೂಕೀ


No comments:
Post a Comment