ಸಸ್ಯಸಂಕುಲ
ಚಿತ್ರ ಕೃಪೆ : ಅಂತರ್ಜಾಲ
ಬರಗಾಲದಲ್ಲಿ
ಬಿಸಿಲ ಬೇಗೆಗೆ
ಬಸವಳಿದು ಕುಳಿತೆ
ಒಂಟಿ ಮರದ ಕೆಳಗೆ
II ೧ II
ಝಳಪಿಸುತಿಹ ಬಿಸಿಲ
ಬೇಗೆಗಳನು ಹೀರಿ
ಅಸರೆಯನು ನೀಡಿತು
ಬಳಲಿ ಬಂದ ನನಗೆ
II ೨ II
ಚಳಿಗಾಲದಲ್ಲಿ
ಚಳಿಯನ್ನು ತಾಳದೆ
ಉರುವಲಿಗಾಗಿ
ಆ ಮರವ ಕಡಿದೆ
II ೩ II
ತನ್ನನ್ನೆ ದಹಿಸಿ
ಬಿಸಿಯನ್ನು ಹರಡಿ
ತಂಪನ್ನು ಬಡಿದೋಡಿಸಿ
ರಕ್ಷಣೆಯನೀಡಿತೆನೆಗೆ
II ೪ II
ಮರಳಿ ಬಂತು ಬರಗಾಲ
ಕಡು ಬಿಸಿಲು ನೆರಳಿಲ್ಲ
ಒಂಟಿಮರವ ಕಡಿದಿಹೆನು
ನಾನೆಲ್ಲಿ ಹೋಗಲಿಂದು
II ೫ II
ಮರವನ್ನು ಕಡಿದಾಗ
ಎಲ್ಲಿತ್ತು ನನ್ನರಿವು
ಮುಂದಿಹುದು ಬೇಸಗೆಕಾಲ
ಬೇಕೆನಗೆ ನೆರಳಿನಾಸರೆ
II ೬ II
ಓ ಮನುಜ ಇನ್ನಾದರೂ ತಿಳಿ
ಸಸ್ಯಸಂಕುಲವೇ ನಮ್ಮುಸಿರು
ಮಾಡದಿರು ಅರಣ್ಯನಾಶ
ತಿಳಿಸಿ ಹೇಳೋ ಓ ಮುಖ್ಯಪ್ರಾಣ
II೭ II





