Saturday, June 29, 2013

ಸಮಯದ ಪಯಣ

ಸಮಯದ ಪಯಣ 

  ಚಿತ್ರ ಕೃಪೆ : ಅಂತರ್ಜಾಲ 

ಸೂರ್ಯನಿಗೂ ಚಂದ್ರನಿಗೂ
ಎಲ್ಲಿಯ ಕದನ
ಸಂವತ್ಸರಗಳ ಆಗಮನ
ಇದು ಕಾಲನ ನಿಯಮ
  II ೧   II
ಹಗಲಿಗೂ ಇರುಳಿಗೂ
ಎಲ್ಲಿಯ ಮಿಲನ
ದಿನಗಳ ಜನುಮ 
ಇದು ಜಗದ ನಿಯಮ
  II ೨   II
ಸಾಗುತಿದೆ ಗಡಿಯಾರದ
ಮುಳ್ಳಿನ ಪಯಣ
ಭೂಮಿಯ ಭ್ರಮಣ
ಇದು ಸಮಯದ ಚರಣ
  II೩   II
ಚಳಿ ಮಳೆ ಬೇಸಗೆ
ಕಾಲಗಳ ಆಗಮನ
ಕಷ್ಟ ಸುಖಗಳ ಸಮ್ಮಿಲನ
ಇದು ಬದುಕಿನ ಕವನ
  II ೪   II
ಸತ್ಯಕು ಸುಳ್ಳಿಗೂ
ಎಲ್ಲಿಯ ಗೆಳೆತನ
ಕಲಿಯುಗದ ಕಾರಣ
ತಿಳಿಸೋ ಓ ಮುಖ್ಯಪ್ರಾಣ
  II ೫  II 

ಇಂತೀ:  ಜ್ಯೋಮೂಕೀ

No comments:

Post a Comment