ಮಿಂಚಿಪದವು ಅಡ್ಕದಿ ಹುಟ್ಟಿ
ಕಲ್ಲೇರಿಮೂಲೆ ಗುಡ್ಡದ ಸೆರಗಲಿ ಹರಿದು
ಐಪಂಜಿಗುಳಿಯನು ಸುತ್ತಿ ಬಳಸಿ
ಮುಂದಕೆ ಸಾಗುತಿದೆ ಜಲಪಾತ
ಬೇಸಗೆಯಲಿ ಬತ್ತಿ ಹೋಗುವ
ಚಳಿಗಾಲದಿ ಮನಮೋಹಕವು
ಕಲ್ಲೆರಿಮೂಲೆಗೆ ಮುಕುಟ ಮಣಿಯು
ಕಲ್ಲು ಬಂಡೆಗಳ ಏರಿ ಇಳಿದು
ಬಿಳಿ ನೊರೆಗಳ ಉಕ್ಕಿಸಿ ಹರಿದು
ತೋಟ ಗದ್ದೆಗಳ ಸುತ್ತುಬಳಸಿ
ನೋಡುವ ಕಣ್ಣುಗಳಿಗೆ ವರ್ಷ ಧಾರೆ
ಕುಡಿವ ತನುವಿಗೆ ಸುಜಲಧಾರೆ
ಬೆಳೆವ ಬೆಳೆಗೆ ಅಮೃತ ಧಾರೆ
ಕಲ್ಲೇರಿಮೂಲೆ ಜನರಿಗೆ ಜೀವನಾಧಾರೆ
ಜೀವ ಸಂಕುಲಕೆ ಜಲಮೂಲವು
ಚೆಲುವಿನ ಚಿತ್ತಾರದ ಸೊಬಗಿದು
ಬತ್ತದಿರಲಿ ನೀರ ಸೆಲೆ ಓ ಮುಖ್ಯಪ್ರಾಣ
ಕಲ್ಲೇರಿಮೂಲೆ ಗುಡ್ಡದ ಸೆರಗಲಿ ಹರಿದು
ಐಪಂಜಿಗುಳಿಯನು ಸುತ್ತಿ ಬಳಸಿ
ಮುಂದಕೆ ಸಾಗುತಿದೆ ಜಲಪಾತ
II ೧ II
ಮಳೆಗಾಲದಿ ಉಕ್ಕಿ ಹರಿಯುವಬೇಸಗೆಯಲಿ ಬತ್ತಿ ಹೋಗುವ
ಚಳಿಗಾಲದಿ ಮನಮೋಹಕವು
ಕಲ್ಲೆರಿಮೂಲೆಗೆ ಮುಕುಟ ಮಣಿಯು
II ೨ II
ನೂರು ಅಡಿ ಎತ್ತರದಿ ಧುಮುಕಿಕಲ್ಲು ಬಂಡೆಗಳ ಏರಿ ಇಳಿದು
ಬಿಳಿ ನೊರೆಗಳ ಉಕ್ಕಿಸಿ ಹರಿದು
ತೋಟ ಗದ್ದೆಗಳ ಸುತ್ತುಬಳಸಿ
ನೋಡುವ ಕಣ್ಣುಗಳಿಗೆ ವರ್ಷ ಧಾರೆ
ಕುಡಿವ ತನುವಿಗೆ ಸುಜಲಧಾರೆ
ಬೆಳೆವ ಬೆಳೆಗೆ ಅಮೃತ ಧಾರೆ
ಕಲ್ಲೇರಿಮೂಲೆ ಜನರಿಗೆ ಜೀವನಾಧಾರೆ
II ೩ II
ಪ್ರಕೃತಿ ದೇವಿಯ ಕಿರು ಕಾಣಿಕೆಯುಜೀವ ಸಂಕುಲಕೆ ಜಲಮೂಲವು
ಚೆಲುವಿನ ಚಿತ್ತಾರದ ಸೊಬಗಿದು
ಬತ್ತದಿರಲಿ ನೀರ ಸೆಲೆ ಓ ಮುಖ್ಯಪ್ರಾಣ
II ೪ II

No comments:
Post a Comment