Saturday, June 8, 2013

ಕಣ್ಣಿನ ಭಾವ

 ಕಣ್ಣಿನ ಭಾವ 

 ಚಿತ್ರ ಕೃಪೆ : ಸಂಧ್ಯಾ ಗುರುಮೂರ್ತಿ 
ನಿನ್ನ ಕಣ್ಣ ಬಿಂಬದಲ್ಲಿ
ಕಂಡೆ ನಾನು ನನ್ನನು
ನನ್ನ ಹೃದಯ ಭಾವದಲ್ಲಿ
ಕಂಡೆ ನಾನು ನಿನ್ನನು
  II ೧ II
ಕಣ್ಣ ಗೋಲ ಸುತ್ತುತಿರಲು
ನನ್ನ ನಾನು ಮರೆತೆ
ಹೃದಯ ಭಾವ ಮೀಟುತಿರಲು
ಪ್ರಣಯ ಸುಖದಿ ತೇಲಿದೆ
  II ೨ II
ಅಂತರಂಗದ ಕನಸುಗಳು
ಕಣ್ಣುಗಳಲ್ಲಿ ಕಾಣ್ವದು
ಅದಕ್ಕೆ ತಾನೆ ಪೆಳ್ವರು
ಕಣ್ಣು ಮನದ ಬಾಗಿಲು
  II ೩ II
ಭಾವನೆಗಳ ಸಮ್ಮಿಲನ
ಪ್ರೇಮಿಗಳಿಗೆ ರಸದೌತಣ
ಕಣ್ಣು ಕಣ್ಣು ಬೆರೆಯಿತು
ಮನಗಳೆರಡು ನುಲಿಯಿತು
  II ೪ II
ಪ್ರೀತಿ ಪ್ರೇಮ ಪ್ರಣಯ
ಕಣ್ಣು ಹೃದಯಗಳ ಕವನ
ಭಾವನೆಗಳ ಸಮ್ಮಿಲನ
ವಿವರಿಸು ನೀ ಮುಖ್ಯಪ್ರಾಣ
  II ೫  II 

ಇಂತೀ:  ಜ್ಯೋಮೂಕೀ

No comments:

Post a Comment