ಹೊಸ ವರುಷ
ಕಾಲ ಚಕ್ರವು ಉರುಳುತಿದೆ
ವರುಷ ವರುಷಗಳು ಕಳೆದು
ಬಂದಿದೆ ಹೊಸ ವರುಷ
ನವ ಭಾವ ನವ ಜೀವ
ನವ ಚೈತನ್ಯವ ತುಂಬಿ
ತಂದಿದೆ ಬಾಳಿಗೆ ಹರುಷ
ಕಹಿ ನೆನಪುಗಳ ಮರೆತು
ನವ ಗುರಿಯ ಕುರಿತು
ಹೊಸ ಬಾಳ ಬಾಳೋಣ
ಜೊತೆಗೂಡಿ ಕಲೆತು
ಭಾತೃತ್ವದಿ ಬೆರೆತು
ನಾಡು ನುಡಿ ಕಟ್ಟೋಣ
ಜಗವು ನಾಟಕದ ರಂಗಸ್ತಳ
ಜೀವ ಜಂತುಗಳೇ ಪಾತ್ರಧಾರಿ
ವರುಷ ವರುಷಗಳೇ ಚರಣ
ಜಗವು ನಾಟಕದ ರಂಗಸ್ತಳ
ಜೀವ ಜಂತುಗಳೇ ಪಾತ್ರಧಾರಿ
ವರುಷ ವರುಷಗಳೇ ಚರಣ
ಜೀವದ ಹುಟ್ಟು ಪಲ್ಲವಿಯು
ಸಾವೇ ಪಾತ್ರದ ಅಂತ್ಯವು
ಸೂತ್ರಧಾರಿ ನೀನೆ ಮುಖ್ಯಪ್ರಾಣ
No comments:
Post a Comment