ಕಲ್ಲುಬಂಡೆ
ಚಿತ್ರ ಕೃಪೆ : ಅಂತರ್ಜಾಲ
ಅದು ಸಮುದ್ರ ದಂಡೆ
ಅಲ್ಲಿಹುದೊಂದು ಕಲ್ಲುಬಂಡೆ
ಬೀಸುತಿಹುದು ಬಿರುಗಾಳಿ
ಸುರಿಯುತಿಹುದು ಸಿಡಿಲು ಮಳೆ
ಕೊರೆಯುತಿಹುದು ಕಡು ಬಿಸಿಲು
ಅಬ್ಬರಿಸುತಿಹುದು ಬೃಹತ್ ತೆರೆ
ನಿನ್ನೆ ನಿನ್ನೆಗೆ, ಇಂದು ಇಂದಿಗೆ;
ಬರಲಿಹುದು ನಾಳೆ ನಾಳೆಗೆ
ಕಾಲಚಕ್ರವದು ಉರುಳುತಿಹುದು
ಶಿಲಾಪದರವು ಎದೆಗುಂದದೆ ನಿಂತಿಹುದು
ಕಷ್ಟವೇ ಬರಲಿ ಸುಖವೇ ಸಿಗಲಿ
ಹಗಲೇ ಕಾಣಲಿ ಇರುಳೆ ಇರಲಿ
ದೃಡವಾಗಿ ನಿಂತಿಹುದು ಶಿಲಾಹೂರಣ
ಪ್ರಕೃತಿ ರಹಸ್ಯವ ಬಿಡಿಸೋ ಮುಖ್ಯಪ್ರಾಣ
ಇಂತೀ: ಜ್ಯೋಮೂಕೀ

Good one.. then i can say live like a Kallu Bande.. (Sandhya will kill me .. :) :) )
ReplyDeleteWhat is ಜ್ಯೋಮೂಕೀ?
ಕಾವ್ಯ ನಾಮ....ಜ್ಯೋತಿ ಮೂರ್ತಿ ಕೀರ್ತಿ first three letters...I used to have same as my kavya naama in my child hood...in english...JMK....
Delete