Saturday, August 5, 2023

ವಿಷ್ಣುಸಹಸ್ರನಾಮ

ವಾಸುದೇವನ ಸಾವಿರ ನಾಮವ ಬನ್ನಿ ಭಜಿಸುವ ಜೊತೆ ಸೇರಿ
ನಾಮಸ್ಮರಣೆಯ ಪುಣ್ಯ ಫಲವನು ಜಗಕೆ ಪಸರಿಸುವ ಎಲ್ಲ ಕೂಡಿ (ಪ) 
ಯುಧಿಷ್ಠಿರನು ಕೇಳಿದ ನಾಮ ಭೀಷ್ಮ ಪಿತಾಮಹ ಹೇಳಿದ ನಾಮ 
ಭವಬಂಧನವ ಕಳೆಯುವ ನಾಮ ಮೋಕ್ಷ ಪ್ರಾಪ್ತಿಗೆ ಪೂರಕ ನಾಮ (1)
ವೇದವ್ಯಾಸರಿಂದ ವಿರಚಿತ ಸ್ತೋತ್ರ ಅನುಷ್ಟಪ್ ಛಂದಸ್ಸಿನಲ್ಲಿ ರಚಿಸಿರುವ ಸ್ತೋತ್ರ 
ದೇವಕಿ ಸುತನ ಸ್ತುತಿಸುವ ಸ್ತೋತ್ರ ಮುಕ್ತಿ ಮಾರ್ಗವ ತೋರಿಸುವ ಸ್ತೋತ್ರ (2)
ವಿಷ್ಣುಸಹಸ್ರನಾಮ ಪರಾಯಣ ಶ್ರವಣ ಆತ್ಮ ಅಂತರಾತ್ಮದ ಶುದ್ಧೀಕರಣ
ರಾಮ ನಾಮದ ಸ್ಮರಣ ಮಾಡೋ ಮನ ನೀಡೋ ಮುಖ್ಯಪ್ರಾಣ (3)
ರಚನೆ: ಜ್ಯೋಮೂಕೀ

No comments:

Post a Comment