ಬದುಕೊಂದು ಭಾವಗೀತೆ
ಭಾವನೆಗಳೇ ಬರಹಕೆ ಹಣತೆ
ಮುದದಿಂದ ಅರಳಲಿ ಕವಿತೆ
ಹರುಷದಿ ಸವಿಯಲು ಜನತೆ
ಸ್ವರ ಸಾಹಿತ್ಯದ ಸಮ್ಮಿಲನ
ಭಾವನೆಗಳ ಆಂದೋಲನ
ಕವಿಯ ಪಾಂಡಿತ್ಯದ ಹೂರಣ
ಕವಿತೆಯ ರೂಪದಿ ಅನಾವರಣ
ಹರುಷವಿರಲಿ ವಿರಹವಿರಲಿ
ಧುಮ್ಮಿಕ್ಕುವುದು ಬರಹದಲಿ
ಕವಿ ಕಂಡನು ತನ್ನ ಕಣ್ಣಲಿ
ನಿರೂಪಿಸಿದನು ಲೇಖನಿಯಲಿ
ಜನನ ಮರಣದ ಪಯಣದಿ
ಭಾವನೆಗಳು ಹರಿವುದು ಬರಹದಿ
ಕವನವದು ಆವಿರ್ಭವಿಸಿತು
ಮುಖ್ಯಪ್ರಾಣನ ನಿನ್ನ ದಯೆ ಇರಲಿ
-ಗುರು
No comments:
Post a Comment