ಮುಂಜಾನೆ ಹೊಂಬಿಸಿಲು ಹರಡಿ ಹಬ್ಬಿದಂತೆಲ್ಲಾ
ಮಬ್ಬುಗತ್ತಲೆ ಕಳೆದು ಹುರುಪು ಪಸರಿಸುತಿಹುದು IIಪII
ಮೂಡಣದ ಬಾನಿನಲಿ ರವಿ ಮೇಲೇರುವಾಗ
ಹೊಳೆವ ಹೊಂಗಿರಣಗಳು ಜಗಕೆ ರಂಗೆರಿಸುತಿಹುದು
ಬೀಸುತಿಹ ಕುಳಿರ್ಗಾಳಿ ಹರಡುತಿಹ ಸೋನೆ ಮಂಜು
ಸೂರ್ಯ ಕಿರಣದ ನಡುವೆ ಸ್ಪಟಿಕದಂತೆ ಹೊಳೆಯುತಿಹುದು
ಹಕ್ಕಿಗಳ ಮಾರ್ದನಿಯು ಕೀಟಗಳ ಕಲರವವು
ಮುಂಜಾನೆಯ ಹೊಂಬಿಸಿಲು ನವ ಹುರುಪು ತಂದಿಹುದು
ಇರುಳು ಕಳೆದಿಹುದು ಹಗಲು ಮುಂದಿಹುದು
ಕಪ್ಪುಕತ್ತಲು ಕಳೆದು ನವೋತ್ಸಾಹ ಪುಟಿಯುತಿಹುದು
ಗ್ರಹ ಭ್ರಮಣೆಯಾಗಿ ವರ್ಷ ವರ್ಷಗಳುರುಳುತಿಹುದು
ಕಾಲಚಕ್ರದ ರಹಸ್ಯವ ನೀ ಪೇಳೊ ಓ ಮುಖ್ಯಪ್ರಾಣ
ಮಬ್ಬುಗತ್ತಲೆ ಕಳೆದು ಹುರುಪು ಪಸರಿಸುತಿಹುದು IIಪII
ಮೂಡಣದ ಬಾನಿನಲಿ ರವಿ ಮೇಲೇರುವಾಗ
ಹೊಳೆವ ಹೊಂಗಿರಣಗಳು ಜಗಕೆ ರಂಗೆರಿಸುತಿಹುದು
ಬೀಸುತಿಹ ಕುಳಿರ್ಗಾಳಿ ಹರಡುತಿಹ ಸೋನೆ ಮಂಜು
ಸೂರ್ಯ ಕಿರಣದ ನಡುವೆ ಸ್ಪಟಿಕದಂತೆ ಹೊಳೆಯುತಿಹುದು
ಹಕ್ಕಿಗಳ ಮಾರ್ದನಿಯು ಕೀಟಗಳ ಕಲರವವು
ಮುಂಜಾನೆಯ ಹೊಂಬಿಸಿಲು ನವ ಹುರುಪು ತಂದಿಹುದು
ಇರುಳು ಕಳೆದಿಹುದು ಹಗಲು ಮುಂದಿಹುದು
ಕಪ್ಪುಕತ್ತಲು ಕಳೆದು ನವೋತ್ಸಾಹ ಪುಟಿಯುತಿಹುದು
ಗ್ರಹ ಭ್ರಮಣೆಯಾಗಿ ವರ್ಷ ವರ್ಷಗಳುರುಳುತಿಹುದು
ಕಾಲಚಕ್ರದ ರಹಸ್ಯವ ನೀ ಪೇಳೊ ಓ ಮುಖ್ಯಪ್ರಾಣ
ಇಂತೀ: ಜ್ಯೋಮೂಕೀ

No comments:
Post a Comment